ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವತಿಯಿಂದ ಅಲ್ ಮುಂತದಾ ತಾಲೂಕು ಸಖಾಫಿ ಸಮಾವೇಶ ಮತ್ತು ಮಹಾಸಭೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾದ ಮದನಿ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು. ಜುಲೈ 8 ರಂದು ಬಿಸಿ ರೋಡಿನ ಮೆಲ್ಕಾರ್ ಸಾಗರ್ ಆಡಿಟೋರಿಯಂ ನಲ್ಲಿ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ನೇತ್ರತ್ವದಲ್ಲಿ ನಡೆಯಲಿರುವ ಮುಂತದ ಸ್ಸಖಾಫಿಯ್ಯೀನ್ ರಾಜ್ಯ ಸಖಾಫಿ ಸಂಗಮದ ಪ್ರಚಾರಾರ್ಥ ನಡೆದ ಪ್ರಸ್ತುತ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಅಲ್ ಮದೀನ ಮಂಜನಾಡಿ ಸಾರಥಿ ಅಬ್ದುಲ್ ಖಾದರ್ ಸಖಾಫಿ ಮಾತನಾಡಿದರು. ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಅಧ್ಯಕ್ಷತಾ ಭಾಷಣ ಮಾಡಿದರು. ಸಖಾಫಿ ಕೌನ್ಸಿಲ್ ರಾಜ್ಯ ನಾಯಕರಾದ ಮೆಹಬೂಬ್ ಸಖಾಫಿ ಕಿನ್ಯ ಹಾಗು ತಾಲೂಕು ಸಖಾಫಿ ಕೌನ್ಸಿಲ್ ಕೋಶಾಧಿಕಾರಿ ರಫೀಖ್ ಮದನಿ ಅಲ್ ಕಾಮಿಲ್ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಅಶ್ಅರಿಯ್ಯಃ ಸಂಸ್ಥೆಯ ಸಾರಥಿ ಮುಹಮ್ಮದ್ ಅಲಿ ಸಖಾಫಿ ಮಾತನಾಡಿ ಜಾಗತಿಕ ಮುಸಲ್ಮಾನರ ನಾಯಕರಾಗಿ ಗುರುತಿಸಿಕೊಂಡಿರುವ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಶಿಷ್ಯತ್ವವನ್ನು ಪಡೆದ ಸಖಾಫಿಗಳು ಇಂದು ಶೈಕ್ಷಣಿಕ, ಸಾಮಾಜಿಕ, ಸಾಮುದಾಯಿಕವಾದ ವಿವಿಧ ರಂಗಗಳಲ್ಲಿ, ಇಲಾಖೆಗಳಲ್ಲಿ ಸೇವೆಯನ್ನು ನೀಡಿ ಮಾದರಿಯಾಗುತ್ತಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿ...