ಅಲ್ ಮುಂತದಾ ಮಂಗಳೂರು ತಾಲೂಕು ಸಖಾಫಿ ಸಮಾವೇಶ ಮತ್ತು ಮಹಾಸಭೆ
ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ವತಿಯಿಂದ ಅಲ್ ಮುಂತದಾ ತಾಲೂಕು ಸಖಾಫಿ ಸಮಾವೇಶ ಮತ್ತು ಮಹಾಸಭೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾದ ಮದನಿ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಜುಲೈ 8 ರಂದು ಬಿಸಿ ರೋಡಿನ ಮೆಲ್ಕಾರ್ ಸಾಗರ್ ಆಡಿಟೋರಿಯಂ ನಲ್ಲಿ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ನೇತ್ರತ್ವದಲ್ಲಿ ನಡೆಯಲಿರುವ ಮುಂತದ ಸ್ಸಖಾಫಿಯ್ಯೀನ್ ರಾಜ್ಯ ಸಖಾಫಿ ಸಂಗಮದ ಪ್ರಚಾರಾರ್ಥ ನಡೆದ ಪ್ರಸ್ತುತ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಅಲ್ ಮದೀನ ಮಂಜನಾಡಿ ಸಾರಥಿ ಅಬ್ದುಲ್ ಖಾದರ್ ಸಖಾಫಿ ಮಾತನಾಡಿದರು.
ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಅಧ್ಯಕ್ಷತಾ ಭಾಷಣ ಮಾಡಿದರು. ಸಖಾಫಿ ಕೌನ್ಸಿಲ್ ರಾಜ್ಯ ನಾಯಕರಾದ ಮೆಹಬೂಬ್ ಸಖಾಫಿ ಕಿನ್ಯ ಹಾಗು ತಾಲೂಕು ಸಖಾಫಿ ಕೌನ್ಸಿಲ್ ಕೋಶಾಧಿಕಾರಿ ರಫೀಖ್ ಮದನಿ ಅಲ್ ಕಾಮಿಲ್ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ಅಶ್ಅರಿಯ್ಯಃ ಸಂಸ್ಥೆಯ ಸಾರಥಿ ಮುಹಮ್ಮದ್ ಅಲಿ ಸಖಾಫಿ ಮಾತನಾಡಿ ಜಾಗತಿಕ ಮುಸಲ್ಮಾನರ ನಾಯಕರಾಗಿ ಗುರುತಿಸಿಕೊಂಡಿರುವ ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಶಿಷ್ಯತ್ವವನ್ನು ಪಡೆದ ಸಖಾಫಿಗಳು ಇಂದು ಶೈಕ್ಷಣಿಕ, ಸಾಮಾಜಿಕ, ಸಾಮುದಾಯಿಕವಾದ ವಿವಿಧ ರಂಗಗಳಲ್ಲಿ, ಇಲಾಖೆಗಳಲ್ಲಿ ಸೇವೆಯನ್ನು ನೀಡಿ ಮಾದರಿಯಾಗುತ್ತಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ದ.ಕ ಜಿಲ್ಲಾ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ ಆಶಂಶಾ ಭಾಷಣ ಮಾಡಿದರು. ಜಿಲ್ಲಾ ನಾಯಕರುಗಳಾದ ಅಬ್ದುಲ್ ಅಝೀಝ್ ಸಖಾಫಿ ಪರಪ್ಪು, ಸೆರ್ಕಳ ಇಬ್ರಾಹಿಂ ಸಖಾಫಿ ಮತ್ತು ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ನಾಯಕರು, ಸದಸ್ಯರು ಉಪಸ್ಥಿತರಿದ್ದರು.
2024 - 26 ನೇ ಸಾಲಿನ ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ ಇದರ ನೂತನ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾ ವೀಕ್ಷಕರಾಗಿ ರಾಜ್ಯ ನಾಯಕರಾದ ಮುಸ್ತಫ ಸಖಾಫಿ ಬೇಂಗಿಲ ಆಗಮಿಸಿದ್ದರು.
ಅಧ್ಯಕ್ಷರಾಗಿ ಮುನೀರ್ ಸಖಾಫಿ ಉಳ್ಳಾಲ, ಪ್ರ ಕಾರ್ಯದರ್ಶಿಯಾಗಿ ಫಾರೂಖ್ ಸಖಾಫಿ ಮದನಿ ನಗರ, ಕೋಶಾಧಿಕಾರಿಯಾಗಿ ಹನೀಫ್ ಸಖಾಫಿ ಕಿನ್ಯ ಇವರನ್ನು ಆರಿಸಲಾಯಿತು.
ಉಪಾಧ್ಯಕ್ಷರುಗಳಾಗಿ ವಿ ಎ ಮುಹಮ್ಮದ್ ಸಖಾಫಿ ವಳವೂರು, ಬಶೀರ್ ಸಖಾಫಿ ಉಳ್ಳಾಲ, ಅಬ್ದುಲ್ ಕರೀಂ ಸಖಾಫಿ ದೇರಳಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ಹೈದರಾಲಿ ಸಖಾಫಿ ಇನೋಳಿ, ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ನವಾಝ್ ಸಖಾಫಿ ಅಡ್ಯಾರ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ಸಖಾಫಿ ಪೂಡಲ್, ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ, ರಫೀಖ್ ಸಖಾಫಿ ಕಂಡತ್ ಪಲ್ಲಿ, ಅಝೀಝ್ ಸಖಾಫಿ ಉಳ್ಳಾಲ, ಮೆಹಬೂಬ್ ಸಖಾಫಿ ಕಿನ್ಯ, ಸಿದ್ದೀಖ್ ಸಖಾಫಿ ತಿಬ್ಲೆಪದವು, ಮುತ್ತಲಿಬ್ ಸಖಾಫಿ ಬೆಳ್ಮ, ಹಕೀಂ ಸಖಾಫಿ ಕಾಟಿಪಳ್ಳ, ಶೌಕತ್ ಸಖಾಫಿ ಬೆಳ್ಮ, ಉಸ್ಮಾನ್ ಸಖಾಫಿ ಕಣ್ಣೂರು, ಶರೀಫ್ ಸಖಾಫಿ ಉರುಮಣೆ, ಮನ್ಸೂರ್ ಅಹ್ಮದ್ ಕಾಮಿಲ್ ಸಖಾಫಿ, ಸೈಫುದ್ದೀನ್ ಸಖಾಫಿ ಉಳ್ಳಾಲ, ಇಬ್ರಾಹಿಂ ಸಖಾಫಿ ತಲಪಾಡಿ, ಫಾರೂಖ್ ಸಖಾಫಿ ಕಾಟಿಪಳ್ಳ, ಹಸನ್ ಸಖಾಫಿ ಕೆಸಿ ರೋಡ್, ಅನ್ವರ್ ಮರ್ಝೂಖಿ ಸಖಾಫಿ, ಇಲ್ಯಾಸ್ ಸಖಾಫಿ ಮದಕ, ಉಸ್ಮಾನ್ ಸಖಾಫಿ ಪೊಳಲಿ, ಹನೀಫ್ ಸಖಾಫಿ ನಾಟೆಕಲ್, ಇರ್ಫಾನ್ ಸಖಾಫಿ ಕಿನ್ಯ ಇವರುಗಳನ್ನು ಆರಿಸಲಾಯಿತು.
ತಾಲೂಕು ಸಲಹಾ ಸಮಿತಿಗಳಾಗಿ ಡಾ ಅಬ್ದುರ್ರಶೀದ್ ಝೈನಿ ಕಾಮಿಲ್, ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ , ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ, ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ, ಅಶ್ಅರಿಯ್ಯಃ ಸಖಾಫಿ, ಕೆಕೆಎಂ ಕಾಮಿಲ್ ಸಖಾಫಿ ಮತ್ತು ಜಿಲ್ಲಾ ಕೌನ್ಸಿಲರುಗಳಾಗಿ ಮುನೀರ್ ಸಖಾಫಿ ಉಳ್ಳಾಲ, ಫಾರೂಖ್ ಸಖಾಫಿ ಮದನಿ ನಗರ, ಹನೀಫ್ ಸಖಾಫಿ ಕಿನ್ಯ, ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಳ್ಳಾಲ, ರಫೀಖ್ ಸಖಾಫಿ ಕಂಡತ್ ಪಳ್ಳಿ, ಮೆಹಬೂಬ್ ಸಖಾಫಿ ಕಿನ್ಯ, ಅಬ್ದುಲ್ ಖಾದಿರ್ ಸಖಾಫಿ ಮಂಜನಾಡಿ, ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ, ಉಸ್ಮಾನ್ ಸಖಾಫಿ ಕಣ್ಣೂರು, ಸತ್ತಾರ್ ಸಖಾಫಿ ಅಡ್ಯಾರ್, ಬಶೀರ್ ಸಖಾಫಿ ಉಳ್ಳಾಲ, ನವಾಝ್ ಸಖಾಫಿ ಅಡ್ಯಾರ್, ಮುಹಮ್ಮದ್ ಸಖಾಫಿ ಪೂಡಲ್, ಶರೀಫ್ ಸಖಾಫಿ ಉರುಮಣೆ, ಅಬ್ದುಲ್ ಅಝೀಝ್ ಸಖಾಫಿ ಉಳ್ಳಾಲ, ಹೈದರ್ ಸಖಾಫಿ ಇನೋಳಿ, ಹಬೀಬ್ ಸಖಾಫಿ ಕಾಟಿಪಳ್ಳ, ವಿ ಎ ಮುಹಮ್ಮದ್ ಸಖಾಫಿ ವಳವೂರು, ಹನೀಫ್ ಸಖಾಫಿ ನಾಟೆಕಲ್, ಹನೀಫ್ ಸಖಾಫಿ ಸುರತ್ಕಲ್, ನವಾಝ್ ಸಖಾಫಿ ಉಳ್ಳಾಲ ಇವರುಗಳನ್ನು ಆಯ್ಕೆ ಮಾಡಲಾಯಿತು.
ಮುನೀರ್ ಸಖಾಫಿ ಉಳ್ಳಾಲ ಸ್ವಾಗತಿಸಿ, ಹಾಲಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಸಖಾಫಿ ಮದನಿ ನಗರ ಧನ್ಯವಾದಗೈದರು.
Comments
Post a Comment