2007 ನೇ ಬ್ಯಾಚ್ ಕರ್ನಾಟಕ ಸಖಾಫಿಗಳ ಸಂಗಮ
ಕರ್ನಾಟಕದ 2007 ನೇ ಬ್ಯಾಚಿನ ಸಖಾಫಿಗಳ ಸಂಗಮ ಮಂಗಳೂರು ಪಡೀಲಿನ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಸಯ್ಯಿದ್ ಹಸನ್ ಸಖಾಫಿ ವಾರಣಾಕ್ಕರ ತಂಙಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹನೀಫ್ ಸಖಾಫಿ ಕಿನ್ಯ ಉದ್ಘಾಟಿಸಿದರು. 2007 ಬ್ಯಾಚಿನ ಸಖಾಫಿ ಶೂರಾದ ಕನ್ವೀನರ್ ಲುಕ್ಮಾನುಲ್ ಹಕೀಂ ಸಖಾಫಿ ಮುಕ್ಕಂ ಮಾತನಾಡಿ ಸಖಾಫಿ ಮಿತ್ರರು ಸುಖ ಕ್ಷೇಮ ಪರಸ್ಪರ ಅರಿತಿರಬೇಕು. ಸಖಾಫಿ ಮಿತ್ರರ ಸ್ಥಿತಿಗತಿಗಳ ಬಗ್ಗೆ ಪರಸ್ಪರ ಅರಿತು 2007 ನೇ ಬ್ಯಾಚ್ ಸಮಿತಿಯ ಮುಂದಾಳುತ್ವದಲ್ಲಿ ಸಹಾಯ ಸಹಕಾರ ಮಾಡಲು, ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸಲು, ಸಾಂತ್ವನದ ಮಾತುಗಳನ್ನು ತಿಳಿಸಲು ಸನ್ನದ್ಧರಾಗಬೇಕು ಎಂದು ತಿಳಿಸಿದರು.
ಸಖಾಫಿ ಶೂರಾದ ಕ್ಯಾಬಿನೆಟ್ ನಾಯಕರಾದ ನವಾಝ್ ಸಖಾಫಿ ಉಳ್ಳಾಲ ಮತ್ತು ಅಲೀ ಸಖಾಫಿ ತಾನೂರು ಶುಭ ಹಾರೈಸಿ ಮಾತನಾಡಿದರು. ಅಬ್ದುರ್ರಶೀದ್ ಸಖಾಫಿ ಆನಕ್ಕಯಂ, ನಸೀರ್ ಸಖಾಫಿ ಪುಲಿಕ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಯ್ಯಿದ್ ಹಸನ್ ಸಖಾಫಿ ವಾರಣಾಕ್ಕರ, ಲುಕ್ಮಾನುಲ್ ಹಕೀಂ ಸಖಾಫಿ ಮುಕ್ಕಂ, ಅಬ್ದುರ್ರಶೀದ್ ಸಖಾಫಿ ಆನಕ್ಕಯಂ, ಅಲಿ ಸಖಾಫಿ ತಾನೂರ್, ನಸೀರ್ ಸಖಾಫಿ ಪುಲಿಕ್ಕಲ್, ಹೈದರ್ ಸಖಾಫಿ ಕುಂಜತ್ತೂರು, ಅಬ್ದುಲ್ ಖಾದರ್ ಸಖಾಫಿ ಕೊಲ್ಲಂ ಪಾಡಿ ಸಹಿತವಿರುವ ಸಖಾಫಿ ಶೂರಾದ ನಾಯಕರ ಮುಂದಾಳುತ್ವದಲ್ಲಿ 2007 ನೇ ಬ್ಯಾಚ್ ಕರ್ನಾಟಕ ಸಖಾಫೀಸ್ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. ಚೇರ್ಮಾನ್ ಆಗಿ ಇಬ್ರಾಹಿಂ ಸಖಾಫಿ ಕಬಕ, ಚೀಫ್ ಕನ್ವೀನರಾಗಿ ನವಾಝ್ ಸಖಾಫಿ ಉಳ್ಳಾಲ, ಫೈನಾನ್ಷಿಯಲ್ ಕಾರ್ಯದರ್ಶಿಯಾಗಿ ಹನೀಫ್ ಸಖಾಫಿ ಕಿನ್ಯಾ ಆಯ್ಕೆಯಾದರು.
ವೈಸ್ ಚೇರ್ಮಾನುಗಳಾಗಿ ಅಬ್ದುರ್ರಹ್ಮಾನ್ ಸಖಾಫಿ ಬೀಟಿಗೆ, ಇಸ್ಹಾಖ್ ಸಖಾಫಿ ನಂದಾವರ, ಕನ್ವೀನರುಗಳಾಗಿ ಸೈಫುಲ್ಲಾ ಸಖಾಫಿ ನಾವುಂದ, ಮಸ್ತಫಾ ಸಖಾಫಿ ಬೇಂಗಿಲ, ಕಾರ್ಡಿನೇಟರುಗಳಾಗಿ ಹಮೀದ್ ಸಖಾಫಿ ಬೆಳ್ಳಾರೆ, ಅಶ್ರಫ್ ಸಖಾಫಿ ಪೆರುವಾಯಿ, ಉಸ್ಮಾನ್ ಸಖಾಫಿ ಕೊಡಿಪ್ಪಾಡಿ, ಶಾಹುಲ್ ಹಮೀದ್ ಸಖಾಫಿ ಪಾನಾಜೆ, ಫಾರೂಕ್ ಸಖಾಫಿ ಮದನಿ ನಗರ, ಅಶ್ರಫ್ ಸಖಾಫಿ ಕನ್ಯಾನ ಇವರುಗಳನ್ನು ಆರಿಸಲಾಯಿತು.
ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಸುಲೈಮಾನ್ ಸಖಾಫಿ ಗರಗಂದೂರು, ಅಬ್ದುರ್ರಶೀದ್ ಕೊಟ್ಟಮುಡಿ ಕೊಡಗು, ಅಶ್ರಫ್ ಸಖಾಫಿ ಮುರ, ಅಶ್ರಫ್ ಸಖಾಫಿ ತುರ್ಕಳಿಕೆ, ಶಬೀರ್ ಸಖಾಫಿ ಉಡುಪಿ, ಜಮಾಲುದ್ದೀನ್ ಸಖಾಫಿ ಮುದುಂಗಾರ್ ಇವರುಗಳನ್ನು ಆರಿಸಲಾಯಿತು.
ಸಂಗಮದಲ್ಲಿ 2007 ಬ್ಯಾಚ್ ಕರ್ನಾಟಕ ಸಖಾಫಿಗಳು ಭಾಗವಹಿಸಿದರು. ಇಬ್ರಾಹಿಂ ಸಖಾಫಿ ಕಬಕ ಸ್ವಾಗತಿಸಿದರು. ಸಯ್ಯಿದ್ ಹಸನ್ ಸಖಾಫಿ ತಂಙಲ್ ಸಂಗಮದ ಕೊನೆಯಲ್ಲಿ ದುಆ ನೆರವೇರಿಸಿದರು.

Comments
Post a Comment