Posts

Showing posts from October, 2025

2007 ನೇ ಬ್ಯಾಚ್ ಕರ್ನಾಟಕ ಸಖಾಫಿಗಳ ಸಂಗಮ

Image
  ಕರ್ನಾಟಕದ 2007 ನೇ ಬ್ಯಾಚಿನ ಸಖಾಫಿಗಳ ಸಂಗಮ ಮಂಗಳೂರು ಪಡೀಲಿನ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಸಯ್ಯಿದ್ ಹಸನ್ ಸಖಾಫಿ ವಾರಣಾಕ್ಕರ ತಂಙಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಖಾಫಿ ಸಂಗಮದ ಒಂದನೇ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಸಖಾಫಿ ಸಂಗಮದ ಎರಡನೇ ವೀಡಿಯೋ ನೋಡಲು ನನ್ನನ್ನು  ಮುಟ್ಟಿ ಹನೀಫ್ ಸಖಾಫಿ ಕಿನ್ಯ ಉದ್ಘಾಟಿಸಿದರು. 2007 ಬ್ಯಾಚಿನ ಸಖಾಫಿ ಶೂರಾದ ಕನ್ವೀನರ್ ಲುಕ್ಮಾನುಲ್ ಹಕೀಂ ಸಖಾಫಿ ಮುಕ್ಕಂ ಮಾತನಾಡಿ ಸಖಾಫಿ ಮಿತ್ರರು ಸುಖ ಕ್ಷೇಮ ಪರಸ್ಪರ ಅರಿತಿರಬೇಕು. ಸಖಾಫಿ ಮಿತ್ರರ ಸ್ಥಿತಿಗತಿಗಳ ಬಗ್ಗೆ ಪರಸ್ಪರ ಅರಿತು 2007 ನೇ ಬ್ಯಾಚ್ ಸಮಿತಿಯ ಮುಂದಾಳುತ್ವದಲ್ಲಿ ಸಹಾಯ ಸಹಕಾರ ಮಾಡಲು, ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸಲು, ಸಾಂತ್ವನದ ಮಾತುಗಳನ್ನು ತಿಳಿಸಲು ಸನ್ನದ್ಧರಾಗಬೇಕು ಎಂದು ತಿಳಿಸಿದರು.  ಸಖಾಫಿ ಶೂರಾದ ಕ್ಯಾಬಿನೆಟ್ ನಾಯಕರಾದ ನವಾಝ್ ಸಖಾಫಿ ಉಳ್ಳಾಲ ಮತ್ತು ಅಲೀ ಸಖಾಫಿ ತಾನೂರು ಶುಭ ಹಾರೈಸಿ ಮಾತನಾಡಿದರು. ಅಬ್ದುರ್ರಶೀದ್ ಸಖಾಫಿ ಆನಕ್ಕಯಂ, ನಸೀರ್ ಸಖಾಫಿ ಪುಲಿಕ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯ್ಯಿದ್ ಹಸನ್ ಸಖಾಫಿ ವಾರಣಾಕ್ಕರ, ಲುಕ್ಮಾನುಲ್ ಹಕೀಂ ಸಖಾಫಿ ಮುಕ್ಕಂ, ಅಬ್ದುರ್ರಶೀದ್ ಸಖಾಫಿ ಆನಕ್ಕಯಂ, ಅಲಿ ಸಖಾಫಿ ತಾನೂರ್, ನಸೀರ್ ಸಖಾಫಿ ಪುಲಿಕ್ಕಲ್, ಹೈದರ್ ಸಖಾಫಿ ಕುಂಜತ್ತೂರು, ಅಬ್ದುಲ್ ಖಾದ...