ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಳ್ ಅನುಸ್ಮರಣಾ ಮಜ್ಲಿಸ್, ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ವ್ಯಾಪ್ತಿಯ ರಾಜ್ಯ ಹಾಗು ಜಿಲ್ಲಾ ನಾಯಕರಿಗೆ ಅಭಿನಂದನಾ ಸಮಾರಂಭ ಮತ್ತು ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ಇದರ 2024-26 ನೇ ಸಾಲಿನ ಪ್ರಥಮ ಕಾರ್ಯಕಾರಿಣಿ ಸಭೆ.


ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಳ್ ಅನುಸ್ಮರಣಾ ಮಜ್ಲಿಸ್, ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ವ್ಯಾಪ್ತಿಯ ರಾಜ್ಯ ಹಾಗು ಜಿಲ್ಲಾ ನಾಯಕರಿಗೆ ಅಭಿನಂದನಾ ಸಮಾರಂಭ ಮತ್ತು ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ಇದರ 2024-26 ನೇ ಸಾಲಿನ ಪ್ರಥಮ ಕಾರ್ಯಕಾರಿಣಿ ಸಭೆ ಮಂಜನಾಡಿ ಅಲ್ ಮದೀನ ಕಾಂಫರೆನ್ಸ್ ಹಾಲ್ ನಲ್ಲಿ ನಡೆಯಿತು.

ಮಂಗಳೂರು ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿದರು. ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷರಾದ ಅಶ್ಅರಿಯ್ಯಃ ಮುಹಮ್ಮದ್ ಅಲಿ ಸಖಾಫಿ ಅನುಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಖಾಫಿ ಕೌನ್ಸಿಲ್ ಜಿಲ್ಲಾ ಉಪಾಧ್ಯಕ್ಷರಾದ ಅಲ್ ಮದೀನ ಸಾರಥಿ ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ ಅನುಸ್ಮರಣಾ ಪ್ರಭಾಷಣ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು. ಸಯ್ಯಿದ್ ಕೂರತ್ ತಂಗಳ್ ಹೆಸರಿನಲ್ಲಿ ತಹ್ಲೀಲ್ ಹೇಳಿ ಹದ್ಯಾ ಮಾಡಿ ದುಆ ನೆರವೇರಿಸಲಾಯಿತು.

ಬಳಿಕ ಮಂಗಳೂರು ತಾಲೂಕು ವ್ಯಾಪ್ತಿಯ ರಾಜ್ಯ ಹಾಗು ಜಿಲ್ಲಾ ನೂತನ ನಾಯಕರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ನೂತನ ರಾಜ್ಯಾಧ್ಯಕ್ಷರಾದ ಅಶ್ಅರಿಯ್ಯಃ ಮುಹಮ್ಮದ್ ಅಲಿ ಸಖಾಫಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿ, ಜಿಲ್ಲಾ ಉಪಾಧ್ಯಕ್ಷರಾದ ಅಲ್ ಮದೀನ ಸಾರಥಿ ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಬೂಬ್ ಸಖಾಫಿ ಕಿನ್ಯ, ರಾಜ್ಯ ಸದಸ್ಯರಾದ ಅಬೂಸ್ವಾಲಿಹ್ ಕಾಮಿಲ್ ಸಖಾಫಿ ಬೆಳ್ಮ, ಉಸ್ಮಾನ್ ಸಖಾಫಿ ಕಣ್ಣೂರು,  ಜಿಲ್ಲಾ ಸದಸ್ಯರಾದ ಪೂಡಲ್ ಮುಹಮ್ಮದ್ ಸಖಾಫಿ, ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಹಾಗು ಅಬ್ದುಲ್ ಅಝೀಝ್ ಸಖಾಫಿ ಪರಪ್ಪು ಇವರುಗಳು ಸನ್ಮಾನಿತರಾದವಗಿದ್ದಾರೆ. 

ಪ್ರಸ್ತುತ ಕಾರ್ಯಕ್ರಮದಲ್ಲಿ ಸಖಾಫಿ ಕೌನ್ಸಿಲ್ ಮಂಗಳೂರು ತಾಲೂಕು ಅಧ್ಯಯನ ವಿಭಾಗದ ಉಪಾಧ್ಯಕ್ಷರಾದ ವಿ ಎ ಮುಹಮ್ಮದ್ ಸಖಾಫಿ ವಳವೂರು ಆಕ್ಟಿವಿಟಿ ಫಂಡನ್ನು ರಾಜ್ಯ ಹಾಗು ಜಿಲ್ಲಾ ನಾಯಕರ ಸಮ್ಮುಖದಲ್ಲಿ ತಾಲೂಕು ಕೋಶಾಧಿಕಾರಿ ಹನೀಫ್ ಸಖಾಫಿ ಕಿನ್ಯ ಇವರಿಗೆ ನೀಡುವ ಮೂಲಕ ಆಕ್ಟಿವಿಟಿ ಫಂಡಿಗೆ ಚಾಲನೆ ನೀಡಲಾಯಿತು. ಕಾರ್ಯಕಾರಿಣಿ ಸಭೆಯಲ್ಲಿ ಹಲವು ಮಹತ್ವಪೂರ್ಣ ವಿಷಯಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಆಕ್ಟಿವಿಟಿ ಫಂಡ್, ಸಾಂತ್ವನ ವಿಂಗ್, ಡಾಟಾ ಸಂಗ್ರಹ ಹಾಗು ಸ್ಪೆಶಲ್ ಅಧ್ಯಯನ ತರಗತಿ ವಿಷಯಗಳನ್ನು ಜಾರಿಗೆ ತರಲಾಯಿತು.
ಸಖಾಫಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಫಾರೂಖ್ ಸಖಾಫಿ ಮದನಿ ನಗರ ಸ್ವಾಗತಿಸಿ, ಕೋಶಾಧಿಕಾರಿ ಹನೀಫ್ ಸಖಾಫಿ ಕಿನ್ಯ ಧನ್ಯವಾದ ಮಾಡಿದರು.

Comments

Popular posts from this blog

2007 ನೇ ಬ್ಯಾಚ್ ಕರ್ನಾಟಕ ಸಖಾಫಿಗಳ ಸಂಗಮ

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ (2024 - 2026) ಸಲಹಾ ಸಮಿತಿ ನಾಯಕರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯ ಸಖಾಫಿಗಳು

2007 ಬ್ಯಾಚಿನ ಕರ್ನಾಟಕ ಸಖಾಫಿಗಳು