ಮುವಾಸ ಮುವಾಸ ( ಸ್ನೇಹಿತರು ಹಲವು ವಿಧ )

ನಮ್ಮ ಜೊತೆಗಾರರಲ್ಲಿ ಎಲ್ಲಾ ಸ್ನೇಹಿತರು ಒಂದೇ ಸ್ವಭಾವದವರಲ್ಲ. ಜನರ ಮನಸ್ಸು, ಆಲೋಚನೆಗಳು ಮತ್ತು ಸನ್ನಿವೇಶಗಳು ವಿಭಿನ್ನವಾಗಿವೆ. ಆದ್ದರಿಂದ, ಸಹಾಯಕ್ಕಾಗಿ ಕೇಳಿದಾಗ ಪ್ರತಿಯೊಬ್ಬರೂ ವಿಭಿನ್ನವಾಗಿ ಪ್ರತಿಕ್ರಿಯಿಸುವುದು ಸಹಜ.

1️⃣ ಕೇಳಿದ ತಕ್ಷಣ ಕೊಡುವವರು
ದಾನದ ಶ್ರೇಷ್ಠತೆಯನ್ನು ಅರ್ಥಮಾಡಿದವರಾಗಿದ್ದಾರೆ. ಸಹಾಯ ಮಾಡಲು ಸಂದರ್ಭ ಒದಗಿ ಬಂದರೆ ಸಂತೋಷವಾಗಿರುವರು. “ಕೊಡುವಿಕೆ ಕಡಿಮೆ ಮಾಡುವುದಿಲ್ಲ ಬದಲು ಹೆಚ್ಚು ಮಾಡುತ್ತದೆ” ಎಂಬ ನಂಬಿಕೆ ಅವರಲ್ಲಿದೆ. ಅಂತಹವರು ಸಮುದಾಯದ ದೊಡ್ಡ ಶಕ್ತಿ.

2️⃣ "ಈಗಲೇ ಕೊಡಬೇಕೆ? ನಂತರ ಕೊಟ್ಟರೆ ಸಾಕಲ್ಲವೇ?" ಎಂದು ಕೇಳುವವರು.
ಇವರು ಸಾಮಾನ್ಯವಾಗಿ ವಿಷಯದ ಅರಿವು ಸಂಪೂರ್ಣವಾಗಿ ಅರ್ಥಮಾಡಿಲ್ಲ. ಕೆಲವೊಮ್ಮೆ ಇದು ಕಾರ್ಯನಿರತತೆ (Busy) ಅಥವಾ ಮರೆವಿನ ಕಾರಣದಿಂದ ಉಂಟಾಗುತ್ತದೆ. ಇವರಿಗೆ ಸ್ವಲ್ಪ ನೆನಪಿಸಿ ಕೊಡುವಿಕೆ ಮತ್ತು ವಿವರಣೆ ನೀಡಿದರೆ ಕೆಲವೊಮ್ಮೆ ಇವರೂ ಮುಂದೆ ಬರುತ್ತಾರೆ.

3️⃣ "ನನ್ನೊಂದಿಗೆ ಕೇಳಲು ಇವರು ಯಾರು?" ಎಂದು ಕೇಳುವವರು.
ಇವರ ಮನಸ್ಸಿನಲ್ಲಿ ಹೆಮ್ಮೆ ಅಥವಾ ಸಂಪರ್ಕದ ಅಂತರವಿರಬಹುದು. ಸಹಾಯವನ್ನು ಕೇಳುವುದು ಒಬ್ಬ ವ್ಯಕ್ತಿಗಾಗಿ ಅಲ್ಲ ಬದಲು ಒಂದು ಉತ್ತಮ ಕಾರ್ಯ ಚಟುವಟಿಕೆಗಾಗಿದೆ ಎಂದು ಅರ್ಥಮಾಡಿಕೊಡುವುದು ನಮ್ಮ ಜವಾಬ್ದಾರಿಯಾಗಿದೆ.

4️⃣ ತನಗೆ ಕಷ್ಟವಿದ್ದರೂ ಕೇಳಿದವರನ್ನು ಹಿಂತಿರುಗಿಸದವರು.
ಇವರು ನಿಜವಾಗಿಯೂ ದೊಡ್ಡ ಹೃದಯವಂತರು. ತನ್ನ ಕಷ್ಟಗಳನ್ನು ಮರೆತು ಇತರರಿಗೆ ಸಹಾಯ ಮಾಡುವ ಮನಸ್ಸು ಶ್ರೇಷ್ಠವಾದುದು. ಇಂಥವರೇ ಸಮಾಜದ ನಿಜವಾದ ಶಕ್ತಿ.

5️⃣ ಏನೇ ಆದರೂ ಕೊಡಬಾರದು, ಅದಕ್ಕಾಗಿ ಕಾರಣಗಳನ್ನು ನೀಡುವವರು.
ಹೆಚ್ಚಾಗಿ ಇತರರಿಗೆ ನೀಡಲು ಇವರಿಗೆ ಬಯಕೆ ಇರುವುದಿಲ್ಲ. ಆದ್ದರಿಂದ ಅನೇಕ ಕಾರಣಗಳು ಹೇಳುವರು. ಅವರನ್ನು ದೂಷಿಸದೆ, ದಾನದ ಶ್ರೇಷ್ಠತೆ ಮತ್ತು ಪ್ರತಿಫಲವನ್ನು ಪ್ರೀತಿಯಿಂದ ನೆನಪಿಸುವುದು ಉತ್ತಮ ಮಾರ್ಗವಾಗಿದೆ.

6️⃣ ಯಾವಾಗಲೂ ಕಷ್ಟಗಳ ಬಗ್ಗೆಯೇ ಮಾತನಾಡುವವರು.
ಕೆಲವು ಜನರು ಜೀವನದಲ್ಲಿ ನಿಜವಾದ ತೊಂದರೆಗಳನ್ನು ಹೊಂದಿರಬಹುದು. ಕೆಲವರಿಗೆ ಇದು ಸಾಮಾನ್ಯ ಪದವಾಗಿ ಪರಿಣಮಿಸಿರಬಹುದು. ಅವರನ್ನು ಅರ್ಥಮಾಡಿ, ಸಂಪರ್ಕಿಸಬೇಕು. ಅವರಿಗೆ ಪ್ರಾರ್ಥನೆ ಮತ್ತು ಪ್ರೋತ್ಸಾಹ ಬಹಳ ಮುಖ್ಯ.

7️⃣ "ನಾನು ಏನು ಪಡೆಯುವೆನು?" ಎಂದು ನೋಡುವವರು.
ಇವರು ಲಾಭ ಮತ್ತು ನಷ್ಟದ ವೀಕ್ಷಣೆಯ ಮೂಲಕ ವಿಷಯಗಳನ್ನು ನೋಡುತ್ತಾರೆ. ಆದರೆ ಸತ್ಕರ್ಮಗಳ ನಿಜವಾದ ಲಾಭ ಅಲ್ಲಾಹನ ಬಳಿ ಇದೆ ಎಂದು ಚೆನ್ನಾಗಿ ಹೇಳಿದರೆ, ಅವರ ತಿಳುವಳಿಕೆ )ಧಾರಣೆ) ಬದಲಾಗುವ ಸಾಧ್ಯತೆಯಿದೆ.

✨ ಕೊನೆಯದಾಗಿ,

ಎಲ್ಲರನ್ನೂ ಸಮಾನವಾಗಿ ಪ್ರೀತಿಯಿಂದ ಸಮೀಪಿಸಿ ಒಳ್ಳೆಯದಕ್ಕೆ ಆಹ್ವಾನಿಸುವುದು ನಮ್ಮ ಕೆಲಸವಾಗಿದೆ. ಪ್ರತಿಯೊಬ್ಬರ ಹೃದಯವನ್ನು ಬದಲಾಯಿಸುವುದು ನಮ್ಮ ಕೈಯಲ್ಲಿಲ್ಲ - ಅದು ಅಲ್ಲಾಹನ ಕರುಣೆಯಲ್ಲಿದೆ.

🤲 ದುವಾ:

ಸಹಕಾರ ಮತ್ತು ದಾನ ಮನಸ್ಸು ಅಲ್ಲಾಹನು ನಮ್ಮ ಸ್ನೇಹಿತರ ಹೃದಯದಲ್ಲಿ ತುಂಬಲಿ. ನಮ್ಮ ಸಮುದಾಯವನ್ನು ಬಲಿಷ್ಠಗೊಳಿಸಲಿ. ಆಮೀನ್.
🤲🤲🤲🤲🤲🤲🤲🤲🤲🤲🤲

Comments

Popular posts from this blog

2007 ನೇ ಬ್ಯಾಚ್ ಕರ್ನಾಟಕ ಸಖಾಫಿಗಳ ಸಂಗಮ

ಮಂಗಳೂರು ತಾಲೂಕು ಸಖಾಫಿ ಕೌನ್ಸಿಲ್ (2024 - 2026) ಸಲಹಾ ಸಮಿತಿ ನಾಯಕರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯ ಸಖಾಫಿಗಳು

2007 ಬ್ಯಾಚಿನ ಕರ್ನಾಟಕ ಸಖಾಫಿಗಳು